Indian Railways News => Topic started by irmafia on Jul 06, 2012 - 00:00:25 AM


Title - ಮಂಗಳೂರು ರೈಲು ಸಮಯ ಬದಲಿಗೆ ಆಕ್ರೋಶ, ರೈಲು ನಿಲ್ದಾಣಕ್ಕೆ ಮುತ್ತಿಗೆ - Indiatimes Vijaykarnatka
Posted by : irmafia on Jul 06, 2012 - 00:00:25 AM

ಕಾಸರಗೋಡು: ಚೆರ್ವತ್ತೂರಿನಿಂದ ಮಂಗಳೂರಿಗೆ ಹೋಗುವ ಬೆಳಗಿನ ಪ್ಯಾಸೆಂಜರ್ ರೈಲಿನ ಸಮಯ ಬದಲಾವಣೆಗೆ ಆಕ್ರೋಶ ವ್ಯಕ್ತಪಡಿಸಿ ಎಸ್‌ಐಒ ಸಂಘಟನೆ ವತಿಯಿಂದ ಗುರುವಾರ ನಗರದ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲಾಯಿತು.

ಪ್ಯಾಸೆಂಜರ್ ರೈಲುಗಳ ಸಮಯ ಬದಲಾವಣೆಯಿಂದ ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಉದ್ಯೋಗಿಗಳು ಸಂಕಷ್ಟಕ್ಕೆ ಈಡಾಗಿದ್ದು, ಸಮಸ್ಯೆಯ ಬಗ್ಗೆ ಗಮನ ಸೆಳೆಯುವುದಕ್ಕಾಗಿ ಈ ಮುತ್ತಿಗೆ ನಡೆಯಿತು.

ನಿಲ್ದಾಣ ಆವರಣದಲ್ಲಿ ಕಾರ್ಯಕರ್ತರನ್ನು ತಡೆದ ಪೊಲೀಸರು ಅವರನ್ನು ಬಂಧಿಸಿ ಮುತ್ತಿಗೆ ತೆರವುಗೊಳಿಸಿದರು. ಮುಖಂಡರಾದ ವಿ.ಪಿ.ಶಕೀರ್, ಟಿ.ಎಂ.ಸಿ.ಸಿಯಾದಾಲಿ, ನಿಝಾಂ, ಇಕ್ಬಾಲ್, ಯೂಸುಫ್, ಅಸ್ರಾನ್ ಮೊದಲಾದವರು ನೇತೃತ್ವ ವಹಿಸಿದ್ದರು.